ವಿದ್ಯುತ್ ಚಕ್ರಣದ ರಚನಾಚಿತ್ರ

ಚಕ್ರಣದ ಅಂಶಗಳನ್ನು ಪ್ರತಿನಿಧಿಸುವ ಚಿಹ್ನೆಗಳನ್ನು ಉಪಯೋಗಿಸಿ ಚಕ್ರಣದ ಸಂಪರ್ಕಗಳನ್ನು ಪ್ರದರ್ಶಿಸುವ ರಚನಾಚಿತ್ರವನ್ನು ವಿದ್ಯುತ್ ಚಕ್ರಣದ ರಚನಾಚಿತ್ರ ಎನ್ನುತ್ತಾರೆ. ಈ ರಚನಾಚಿತ್ರವು ಪ್ರತಿಯೊಂದು ಅಂಶದ ನಿರ್ಮಾಣ ಮತ್ತು ಉಪಕರಣದ ಸಂಬಂಧವನ್ನು ಪ್ರದರ್ಶಿಸುವ ಒಂದು ತತ್ತ್ವ ರಚನಾಚಿತ್ರವಾಗಿದ್ದು, ಇದನ್ನು ಶೋಧನೆ ಮತ್ತು ಅಭಿಯಾಂತಿಕ ಯೋಜನೆಗೆ ಅಗತ್ಯವಿದ್ದು ಭೌತಶಾಸ್ತ್ರ ಮತ್ತು ವಿದ್ಯುತ್ ಕ್ಷೇತ್ರದ ಮಾನಕೀಕರಿಸಲಾದ ಚಿಹ್ನೆಗಳನ್ನು ಉಪಯೋಗಿಸಿ ರಚಿಸಲಾಗುತ್ತದೆ.